Online Seva

Sridharashrama facilitates online seva options to its devotees who can’t visit physically to Ashrama. Our intesion is to reach every devotee throught out the world.
Step 1:
See Available Seva list and click on Book Seva
Step 2:
Make the Payment by scanning QR code or entering UPI ID
Step 3:
Send transaction screenshot/receipt, seva information and your personal details to our Whatsapp.
Available Sevas

ಅರ್ಚನ ಸೇವೆ / Archana Seva
ಶ್ರೀ ಭಗವಾನರ ಸನ್ನಿಧಿಯಲ್ಲಿ ಶ್ರೀ ಭಗವಾನರ ಸಮಾಧಿ ಲಿಂಗಕ್ಕೆ ಮತ್ತು ಶ್ರೀ ಭಗವಾನರ ದಿವ್ಯ ಪಾದುಕೆಗಳಿಗೆ ಸಹಸ್ರನಾಮ ಪೂರ್ವಕ ತುಳಸೀ, ಬಿಲ್ವ, ಭಸ್ಮ, ಪುಷ್ಪಗಳಿಂದ ಅರ್ಚನೆಗಳು ನಡೆಯುತ್ತದೆ. ಒಂದು ಹೊತ್ತಿನ ಪೂಜೆಯ ಅರ್ಚನ ಸೇವೆಯು ಈ ಸೇವೆಯಡಿಯಲ್ಲಿ ಬರುತ್ತದೆ.
In Bhagawan Sadguru Shri Swamijy’s Sannidhanam reciting Sahasra Nama, Asthottara Shathanama, Dwadasha Nama from Tulasi, Bilwa Leaces, Pushpa(flowers) and Bhasma. Archana Seva will be offered to Shri Bhagawan’s Samadhi Lingam and Divya Padukas.
Seva Amount : ₹150

ಅಭಿಷೇಕ ಸೇವೆ / Abhisheka Seva
ಶ್ರೀ ಭಗವಾನರ ಸನ್ನಿಧಿಯಲ್ಲಿ ಶ್ರೀ ಭಗವಾನರ ಸಮಾಧಿ ಲಿಂಗಕ್ಕೆ ಮತ್ತು ಶ್ರೀ ಭಗವಾನರ ದಿವ್ಯ ಪಾದುಕೆಗಳಿಗೆ ಶ್ರೀರುದ್ರಾದಿ ವೇದ ಮಂತ್ರಗಳಿಂದ ಅಭಿಷೇಕ ನಡೆಯುತ್ತದೆ. ಅಭಿಷೇಕದಿಂದ ಮನುಷ್ಯನ ಪೂರ್ವಪಾಪಗಳು ನಿವಾರಣೆಯಾಗಿ ಪುಣ್ಯ ವೃದ್ಧಿಯಾಗುತ್ತದೆಯೆಂತಲೂ ಅಜ್ಞಾನ ನಿವಾರಣೆಯಾಗಿ ಜ್ಞಾನ ವೃದ್ಧಿಯಾಗುತ್ತದೆಯೆಂತಲೂ ಮೃತ್ಯು ದೋಷ ನಿವಾರಣೆಯಾಗಿ ಆಯುಷ್ಯ ಅಭಿವೃದ್ಧಿಯಾಗುತ್ತದೆಯೆಂತಲೂ ಶಾಸ್ತ್ರಗಳು ಹೇಳುತ್ತವೆ. ಶಾಸ್ತ್ರಾಧಾರದಂತೆ ಶ್ರೀ ಭಗವಾನರ ಸನ್ನಿಧಿಯಲ್ಲಿ ತ್ರಿಕಾಲ ಅಭಿಷೇಕ ಸೇವೆ ನಡೆಯುತ್ತದೆ. ಒಂದು ಹೊತ್ತಿನ ಅಭಿಷೇಕ ಸೇವೆಯನ್ನು ತಮ್ಮ ಹೆಸರಿನಲ್ಲಿ ಈ ಸೇವಾ ಯೋಜನೆಯಡಿಯಲ್ಲಿ ನಡೆಸಲಾಗುತ್ತದೆ.
In Bhagawan Sadguru Shri Swamijy & Sannidhanam reciting SRI RUDRA MANTRAM and other SUKTHAS Abhisheka Seva will be perform to Shri Bhagawan& Samadhi Lingam and Divya Padukas. According to Agama and Hindu Archana Shastras Abhisheka eradicates Papa(Sin) Grahacharam and Mrutyu and enhances Punya with Ayushya etc. This Seva will be conducted 3 times a day. One time seva will be done in the name of Sevadar.
Seva Amount : ₹250

ನಿತ್ಯ ಶ್ರೀಗುರುಸೇವಾ / Nitya Shri Guruseva
ಶ್ರೀ ಭಗವಾನರು ಶಕ್ತಿಯಿದ್ದವರು ಪ್ರತಿ ದಿನ ಕೇವಲ ಒಂದೇ ಒಂದು ರೂಪಾಯಿಗಳನ್ನು ಶ್ರೀ ಶ್ರೀಧರಾಶ್ರಮದ ಸೇವೆಗೆ ಮುಡುಪಾಗಿ ತೆಗೆದಿಟ್ಟು ವರ್ಷದ ನಂತರ ಶ್ರೀಗುರು ಸನ್ನಿಧಿಗೆ ಅರ್ಪಿಸಬಹುದೆಂತಲೂ ಇದನ್ನು ನಡೆಸಲು ಅನುಕೂಲವಿಲ್ಲದಿದ್ದವರು ವರ್ಷದ ಮೊದಲೇ ದಿನಕ್ಕೊಂದು ರೂಪಾಯಿಗಳಂತೆ ಶ್ರೀ ಆಶ್ರಮಕ್ಕೆ ಅರ್ಪಿಸಬಹುದೆಂತಲೂ ಈ ಸೇವೆಗಳನ್ನು ಮಾಡಲು ಶಕ್ತಿಯಿಲ್ಲದಿದ್ದವರು ವರ್ಷಕ್ಕೆ ಕೇವಲ ಒಂದೇ ಒಂದು ರೂಪಾಯಿಗಳನ್ನು ಶ್ರೀ ಶ್ರೀಧರಾಶ್ರಮ ಸೇವೆಗೆ ಸಲ್ಲಿಸಬಹುದೆಂತಲೂ ಇಲ್ಲಿ ಹಣಕ್ಕಿಂತ ಮುಖ್ಯವಾಗಿ ಭಕ್ತಿಯೇ ಪ್ರಾಮುಖ್ಯವೆಂತಲೂ ಶ್ರೀ ಭಗವಾನರ ಆದೇಶದ ಮೇರೆಗೆ ಶ್ರೀ ಶ್ರೀಧರಾಶ್ರಮದಲ್ಲಿ ಸೇವೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಶ್ರೀ ಆಶ್ರಮವು ತನ್ನ ಎಲ್ಲಾ ಭಕ್ತರಿಗೂ ತಮ್ಮದೇ ಆಶ್ರಮವೆಂಬ ಭಾವನೆ ಬರಲೆಂದು ಶ್ರೀ ಗುರುಗಳು ಅನುಗ್ರಹಿಸಿದ ವಿಶೇಷ ಸೇವೆಯಾಗಿರುತ್ತದೆ.
Bhagawan Sadguru Shri Shridhara Swamijy ordained to his Bhaktas who are economically well sufficiant they can offer one rupee per day to Shri Shridharashrama as Guru Seva, those who unable they can offer one rupee per year as Shri Guruseva. The Main intention of Swamijy every his Bhaktas must think that this Shri Shridharashrama belongs to himself. Here the main intention of Shri Bhagawan is only Bhakti(devotion) not money. From that day this seva is started.
Seva Amount : ₹365

ಮಹಾನೈವೇದ್ಯ ಸಹಿತ ಕಲ್ಪೋಕ್ತ ಮಹಾಪೂಜೆ / Kalpoktha Maha Pooja
ಶ್ರೀ ಭಗವಾನರ ಸನ್ನಿಧಿಯಲ್ಲಿ ಶ್ರೀ ಭಗವಾನರ ಸಮಾಧಿ ಲಿಂಗಕ್ಕೆ ಮತ್ತು ಶ್ರೀ ಭಗವಾನರ ದಿವ್ಯ ಪಾದುಕೆಗಳಿಗೆ ಕಲ್ಪೋಕ್ತ ಮಹಾಪೂಜೆ ನಡೆಯುತ್ತದೆ. ಮಧ್ಯಾಹ್ನದ ಮಹಾಪೂಜೆಯ ಸಮಯದಲ್ಲಿ ಮಹಾನೈವೇದ್ಯ ಸಮರ್ಪಣೆಯಾಗುತ್ತದೆ. ಈ ಸೇವೆಯಲ್ಲಿ ಅಭಿಷೇಕ ಸೇವೆ, ಅರ್ಚನ ಸೇವೆ, ನೀರಾಜನ ಸೇವೆ, ಮಂತ್ರಪುಷ್ಪ ಸೇವೆಗಳು ಸೇರಿರುತ್ತದೆ.
In Bhagawan Sadguru Shri Swamijy’s Sannidhanam every day in the time of Madhyanha(Noon) Kalpoktha Maha Pooja Seva will be offered to Shri Bhagawan’s Samadhi Lingam and Divya Padukas. This seva contains Abhisheka Seva, Archanam Seva, MahaNaivaidya Seva, Nirajana Seva, Mantra Pushpa Seva according Vedic Archana Vidhi.
Seva Amount : ₹400

ನಂದಾದೀಪ ( ಪ್ರತಿ ತಿಂಗಳಿಗೆ) / Nanda Deepam (One Month)
ಶ್ರೀ ಗುರುಮಂದಿರದಲ್ಲೀ ಸನ್ನಿಧಿಯಲ್ಲಿ ಸದಾಕಾಲ ನಂದಾದೀಪ ಸೇವೆ (ತೈಲ/ತುಪ್ಪದ ದೀಪವನ್ನು ಶ್ರೀಗುರುಸನ್ನಿಧಿ, ಮತ್ತು ಶ್ರೀ ದೇವರಸನ್ನಿಧಿಯಲ್ಲಿ ಸದಾಕಾಲ ಉರಿಸುವುದರಿಂದ ಪಾಪ ನಾಶವಾಗಿ ಪುಣ್ಯ ವೃದ್ಧಿಯಾಗುತ್ತದೆ. ಅಜ್ಙಾನ ಮತ್ತು ಆಧ್ಯಾತ್ಮಿಕ ಮತ್ತು ಆಧಿಭೌತಿಕ, ಆದಿದೈವಿಕ, ತಾಪತ್ರಯಗಳು ನಿವಾರಣೆಯಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ ಮತ್ತು ಪೂರ್ವದಿಂದಲೂ ಈ ನಡುವಳಿಕೆ ನಡೆದುಬಂದಿರುತ್ತದೆ. ಈ ಶಾಸ್ತ್ರಾಧಾರದ ಅನುಗುಣವಾಗಿ ಮೇಲೆ ಶ್ರೀ ಭಗವಾನರ ಕಾಲದಿಂದಲೂ ಶ್ರೀ ಭಗವಾನರ ದಿವ್ಯ ಪಾದುಕೆಗಳ ಸನ್ನಿಧಿಯಲ್ಲಿ ಸದಾಕಾಲ ನಂದಾದೀಪ ಸೇವೆ ಅಂದಿನಿಂದ ಇಂದಿನವರೆಗೂ ನಡೆದುಕೊಂಡು ಬರುತ್ತಿದೆ.
In Bhagawan Sadguru Shri Swamijy’s Sannidhanam Nanda Deepam(Light using oil or clarified butter,Ghee) light will be lit always. According to Hindu Shastras Nanda Deepam eradicates sin tapatraya’s and enhance Punya, Jnana and peace from the time of Shri Bhagawan Sadguru Shri Shridhara Swamiji Nanda Deepam will be always lit beore Shri Bhagawan’s Divya Padukas. Now in Before Sannidhanam of Shri Swamijy’s Samadhi and Divya Padukas.
Seva Amount : ₹500

ಭಿಕ್ಷಾಸೇವಾ (ಒಂದು ದಿನದ ಅನ್ನ ಸಂತರ್ಪಣೆ) / Bhiksha Seva
ಶ್ರೀ ಭಗವಾನರ ಸನ್ನಿಧಿಯಲ್ಲಿ ಶ್ರೀ ಭಗವಾನರಿಗೆ ಪ್ರತಿದಿನ ಮಧ್ಯಾಹ್ನ ಭಿಕ್ಷಾಸೇವೆಯನ್ನು ಸಮರ್ಪಿಸಲಾಗುತ್ತದೆ. ಶ್ರೀ ಭಗವಾನರ ಕಾಲದಿಂದಲೂ ಅವರೇ ಸ್ವತಃ ಹಾಕಿರುವ ನಿಯಮದಂತೆ ಈ ಭಿಕ್ಷಾ ಸೇವೆಯ ವಿಧಿ ವಿಧಾನಗಳು ನಡೆದುಕೊಂಡು ಬರುತ್ತಿದ್ದು ಇಂದಿಗೂ ಕೂಡಾ ಅದೇ ರೀತಿ ಚಾಚೂ ತಪ್ಪದೇ ನಡೆಯುತ್ತಿದೆ. ಯತಿಗಳಿಗೆ ಭಿಕ್ಷಾ ಸೇವೆಯನ್ನು ಮಾಡುವುದರಿಂದ ಸೇವೆ ಲ್ಲಿಸುವವನ ಕುಲಕೋಟಿ ಪಾವನವಾಗುತ್ತದೆಯೆಂಬುದು ಶಾಸ್ತ್ರಗಳ ಮತ್ತು ಪೂರ್ವಸೂರಿಗಳ ಆದೇಶವಾಗಿರುತ್ತದೆ. ಅದರಂತೆ ಶ್ರೀ ಭಗವಾನರಿಗೆ ಭಿಕ್ಷಾಸೇವೆಯನ್ನು ಸಲ್ಲಿಸುವ ಸಂದರ್ಭದಲ್ಲಿ ಸೇವಾದಾರರು ಉಪಸ್ಥಿತರಿದ್ದು ಭಿಕ್ಷಾ ವಂದನೆಯನ್ನು ಮಾಡಬಹುದಾಗಿರುತ್ತದೆ. ಅವರ ಅನುಪಸ್ಥಿತಿಯಲ್ಲಿ ಶ್ರೀ ಆಶ್ರಮದ ಅರ್ಚಕರೆ ಭಿಕ್ಷಾ ವಂದನೆಯನ್ನು ಸೇವಾದಾರರ ಹೆಸರಿನಲ್ಲಿ ಮಾಡುತ್ತಾರೆ. ಭಿಕ್ಷಾವಂದನಾ ಕಾಲದಲ್ಲಿ ಪುರುಷರು ತೊಳೆದು ಹಾಕಿದ ಅಥವಾ ಹೊಸ ಪಂಚೆ, ಶಲ್ಯ, ಮಡಿ ಯಾವುದಾದರನ್ನು ಧರಿಸಬೇಕು. ಸ್ತ್ರೀಯರು ಸೀರೆ, ಲಂಗ, ದಾವಣಿ ಧರಿಸಿರಬೇಕು. ಪ್ಯಾಂಟ್, ಪೈಜಾಮ, ಚಡ್ಡಿ, ಚೂಡಿದಾರ್ ಇವುಗಳನ್ನು ಧರಿಸಿ ಭಿಕ್ಷಾವಂದನವನ್ನು ಸಲ್ಲಿಸಲು ಬರುವುದಿಲ್ಲ. ಇಂತಹ ಸಂದರ್ಭ ಶ್ರೀ ಆಶ್ರಮದ ವತಿಯಿಂದಲೇ ಭಿಕ್ಷಾ ವಂದನೆಯನ್ನು ಸಲ್ಲಿಸಲಾಗುವುದು. ನಂತರ ಶ್ರೀ ಆಶ್ರಮದ ಭೋಜನ ಶಾಲೆಯಲ್ಲಿ ಭಕ್ತಾದಿಗಳಿಗೆ ಮಹಾಪ್ರಸಾದದ ವಿನಿಯೋಗವಾಗುತ್ತದೆ. ಏಕಾದಶಿ, ಶ್ರೀ ದತ್ತ ಜಯಂತಿಯ ದಿನ, ಶ್ರೀರಾಮನವಮಿ, ಗ್ರಹಣ, ಶ್ರೀ ಮಹಾಶಿವರಾತ್ರಿ ಮತ್ತು ಕೆಲವು ಭೋಜನ ನಿಷಿದ್ಧವಾದ ದಿನಗಳಲ್ಲಿ ಈ ಸೇವೆ ನಡೆಯುವುದಿಲ್ಲ. ದ್ವಾದಶಿಯಂದು ಪ್ರಾತಃಕಾಲದಲ್ಲಿ ಭಿಕ್ಷಾಸೇವೆಯು ನಡೆಯುತ್ತದೆ. ಶ್ರೀದತ್ತ ಜಯಂತಿ, ಶ್ರೀಗುರುಗಳ ಆರಾಧನಾ ಸಮಯದ ದ್ವಾದಶಿಗಳಂದು ಮಧ್ಯಾಹ್ನ ಭಿಕ್ಷಾ ಸೇವೆ ನಡೆಯುತ್ತದೆ. ಈ ಸೇವೆಯನ್ನು ಸೇವಾ ಕರ್ತರು ಅಪೇಕ್ಷಿಸಿದ ದಿನದಂದು ಸಲ್ಲಿಸಲಾಗುವುದು.
According Hindu Dharmashastra offering Bhiksha to Sanyasi is a holy work, it enhance Ayushya, Arogya, Aishwarya and it eradicates all the sin(Papam) In Bhagawan Sadguru Shri Swamijy’s Sannidhanam in the time of Madhyanha Pooja Bhiksha Seva will be offered to Shri Bhagawan. In the time of doing this Seva dress code ordained by Bhagawan Sadguru Shri Shridhar Swamijy gents-Dhoti and Shalya/towel or (silk, spun dhoti) Ladies-Saree. This Seva will not be held on Ekadashi, Shri Datta Jayanthi, Shri Ramanavami, Shri Mahashivarathri, Shri Krishnastami, Solar and Lunar eclipse and other days prohibited by Hindu Shastras to take meals. On the day of Dwadashi in the time of Pratha Pooja will be offered to Shri Bhagawan (7.00 a.m to 7.30 a.m) This seva can be done on any day given by Sevadar’s.
Seva Amount : ₹1200

ಗೋಸೇವಾ / Gouseva
ಗೋವಿನಲ್ಲಿ 33 ಕೋಟಿ ದೇವತೆಗಳು ವಾಸವಿರುತ್ತಾರೆಂದು ಶ್ರುತಿಗಳು ಹೇಳುತ್ತವೆ. ಗೋಸೇವೆಯನ್ನು ಮಾಡುವುದರಿಂದ ಮನುಷ್ಯನ ಎಲ್ಲಾ ಪಾಪ ತಾಪಗಳು ಅರಿಷ್ಟೆಗಳು ನಿವಾರಣೆಯಾಗಿ ಅತ್ಯಂತ ಕ್ರೂರ ಗ್ರಹಚಾರವು ಕೂಡಾ ಮನಮುಟ್ಟಿ ಗೊಸೇವೆಯನ್ನು ಮಾಡುವುದರಿಂದ ನಿವಾರಣೆಯಾಗುತ್ತದೆಯೆಂದು ಮತ್ತು ಗೋವಿನ ಸೇವೆ ಮಾಡುವುದರಿಂದ ಸಂತತಿ, ಸಂಪತ್ತು, ಆರೋಗ್ಯ, ಕೀರ್ತಿ, ಧರ್ಮಪ್ರವಣತೆ ಇವೆಲ್ಲವನ್ನೂ ಸಂಪಾದಿಸಿಕೊಳ್ಳಬಹುದು. ಪರಮಾತ್ಮನ ಕೃಪೆ ದೊರಕಿಸಿಕೊಳ್ಳಬಹುದು, ಮೋಕ್ಷಕ್ಕೆ ಅನುವಾಗಿ ನಡೆದುಕೊಳ್ಳಬಹುದು.ಪುಣ್ಯ ಬೇಕು ಅಂತಾ ಯಾರಿಗೆ ಕಾಣುತ್ತದೆಯೋ ಅವರು ಗೋರಕ್ಷಣೆ ಮಾಡಬೇಕು, ಎಂದು ಶ್ರೀ ಭಗವಾನರು ಆದೇಶಿಸಿದ್ದಾರೆ. ಶ್ರೀ ಶ್ರೀಧರಾಶ್ರಮ ಸ್ಥಾಪನೆಯಾದ ದಿನದಿಂದ ಇಂದಿನವರೆಗೂ ಶ್ರೀ ಗೋಸೇವೆ ಯಾವುದೆ ಅಬ್ಬರದ ಪ್ರಚಾರವಿಲ್ಲದೇ ನಡೆದುಕೊಂಡು ಬಂದಿರುತ್ತದೆ. ಶ್ರೀ ಶ್ರೀಧರಾಶ್ರಮದ ಗೋಶಾಲೆಗಳಲ್ಲಿ 200ಕ್ಕೂ ಹೆಚ್ಚು ಗೋವುಗಳಿರುತ್ತವೆ. ಈ ಸೇವೆಗೆ ಸಾಂಕೇತಿಕವಾಗಿ 1001 ರೂಪಾಯಿಗಳನ್ನು ಇಟ್ಟಿದ್ದು ಇದಕ್ಕೆ ಮೇಲ್ಪಟ್ಟು ಶಕ್ತಿ ಇದ್ದವರು ಕೊಡಬಹುದಾಗಿರುತ್ತದೆ ಅಥವಾ ತಮ್ಮ ಶಕ್ತ್ಯಾನುಸಾರ ಕೂಡಾ ಕೊಡಬಹುದಾಗಿರುತ್ತದೆ.
According to Hindu Shastras 33 corers gods(Devatas) are residing in cows body. By doing Gouseva Man’s all the sins(Papa) arista will be eradicated. If a man suffering from planets evil Dasha-bhukti, bad gochara Phala by doing Gouseva the grahachara will become down and man will get Santati, Aishwarya, arogya and Keerthi. Shri Bagwan always saying that “By doing Gouseva sincerely man can attained god’s blessings and he can attain MokshaMarga very early. Those who want eradicate sin done in this birtha and previous birth and to attain punya man must do Gouseva. Gou(Cow) is incarnation of Dharma and someone says Pruthvi what it may be man must do Gouseva without fail at least for sometime in his birth. From the beginning of Shri Shridharashrama Shri Bagwan has started Goshala. From that date to until today Gouseva is continuing in this ashrama without any publicity or beating their own drums. In Ashrama’s Goshala is having more than two hundred cows for Gouseva a total amount of Rs 1001( One thousand and one rupees) Sevadars may donate more than this according to their will and wish.
Seva Amount : ₹1200

ಶಾಶ್ವತ ನಿತ್ಯಪೂಜೆ ( F.D. ಖಾಯಂ ನಿಧಿ) / Shashwatha Nitya Pooja ( F.D. Fund)
ಶ್ರೀ ಭಗವಾನರ ಸನ್ನಿಧಿಯಲ್ಲಿ ಶ್ರೀ ಭಗವಾನರ ಸಮಾಧಿ ಲಿಂಗಕ್ಕೆ ಮತ್ತು ಶ್ರೀ ಭಗವಾನರ ದಿವ್ಯ ಪಾದುಕೆಗಳಿಗೆ ತ್ರಿಕಾಲ ಪೂಜೆ ನಡೆಯುತ್ತದೆ. ಈ ಸೇವೆಯಡಿಯಲ್ಲಿ ಒಂದು ಹೊತ್ತಿನ ಪೂಜಾ ಸಂದರ್ಭದಲ್ಲಿ ಸೇವಾದಾರರ ಹೆಸರಿನಲ್ಲಿ ಸೇವೆಯನ್ನು ಸಲ್ಲಿಸಲಾಗುವುದು. ಭಕ್ತಾಧಿಗಳು ನೀಡುವ ಹಣವನ್ನು ಬ್ಯಾಂಕಿನಲ್ಲಿ ಖಾಯಂ ಠೇವಣಿಯಾಗಿಟ್ಟು ಇದರಿಂದ ಬರುವ ಬಡ್ಡಿಯ ಹಣದಲ್ಲಿ ಸೇವಾ ಕರ್ತರು ಅಪೇಕ್ಷಿಸಿದ ದಿನದಂದು ಪ್ರತಿ ವರ್ಷ ಸಲ್ಲಿಸಲಾಗುವುದು.
In Bhagawan Sadguru Shri Swamijy’s Sannidhanam every day three time pooja, Pratha Kala Pooja(morning), Madhyanha Pooja(Noon) Rathri Pooja(Night) will be performed to Shri Bhagawan’s Samadhi Lingam and Divya Padukas. From the interest, amount deposited by the Sevadar’s will be used for this one time pooja seva on any given date or thithi according to Hindu Panchangam.
Seva Amount : ₹2500

ಭಿಕ್ಷಾಸೇವಾ (F.D. ಖಾಯಂ ನಿಧಿ) / Bhiksha Seva (F.D. Permanent Seva)
ಶ್ರೀ ಭಗವಾನರ ಸನ್ನಿಧಿಯಲ್ಲಿ ಶ್ರೀ ಭಗವಾನರಿಗೆ ಪ್ರತಿದಿನ ಮಧ್ಯಾಹ್ನ ಭಿಕ್ಷಾಸೇವೆಯನ್ನು ಸಮರ್ಪಿಸಲಾಗುತ್ತದೆ. ಶ್ರೀ ಭಗವಾನರ ಕಾಲದಿಂದಲೂ ಅವರೇ ಸ್ವತಃ ಹಾಕಿರುವ ನಿಯಮದಂತೆ ಈ ಭಿಕ್ಷಾ ಸೇವೆಯ ವಿಧಿ ವಿಧಾನಗಳು ನಡೆದುಕೊಂಡು ಬರುತ್ತಿದ್ದು ಇಂದಿಗೂ ಕೂಡಾ ಅದೇ ರೀತಿ ಚಾಚೂ ತಪ್ಪದೇ ನಡೆಯುತ್ತಿದೆ. ಯತಿಗಳಿಗೆ ಭಿಕ್ಷಾ ಸೇವೆಯನ್ನು ಮಾಡುವುದರಿಂದ ಸೇವೆ ಲ್ಲಿಸುವವನ ಕುಲಕೋಟಿ ಪಾವನವಾಗುತ್ತದೆಯೆಂಬುದು ಶಾಸ್ತ್ರಗಳ ಮತ್ತು ಪೂರ್ವಸೂರಿಗಳ ಆದೇಶವಾಗಿರುತ್ತದೆ. ಅದರಂತೆ ಶ್ರೀ ಭಗವಾನರಿಗೆ ಭಿಕ್ಷಾಸೇವೆಯನ್ನು ಸಲ್ಲಿಸುವ ಸಂದರ್ಭದಲ್ಲಿ ಸೇವಾದಾರರು ಉಪಸ್ಥಿತರಿದ್ದು ಭಿಕ್ಷಾ ವಂದನೆಯನ್ನು ಮಾಡಬಹುದಾಗಿರುತ್ತದೆ. ಅವರ ಅನುಪಸ್ಥಿತಿಯಲ್ಲಿ ಶ್ರೀ ಆಶ್ರಮದ ಅರ್ಚಕರೆ ಭಿಕ್ಷಾ ವಂದನೆಯನ್ನು ಸೇವಾಕರ್ತರ ಹೆಸರಿನಲ್ಲಿ ಮಾಡುತ್ತಾರೆ. ಭಿಕ್ಷಾವಂದನಾ ಕಾಲದಲ್ಲಿ ಪುರುಷರು ತೊಳೆದು ಹಾಕಿದ ಅಥವಾ ಹೊಸ ಪಂಚೆ, ಶಲ್ಯ, ಮಡಿ ಯಾವುದಾದರನ್ನು ಧರಿಸಬೇಕು. ಸ್ತ್ರೀಯರು ಸೀರೆ, ಲಂಗ, ದಾವಣಿ ಧರಿಸಿರಬೇಕು. ಪ್ಯಾಂಟ್, ಪೈಜಾಮ, ಚಡ್ಡಿ, ಚೂಡಿದಾರ್ ಇವುಗಳನ್ನು ಧರಿಸಿ ಭಿಕ್ಷಾವಂದನವನ್ನು ಸಲ್ಲಿಸಲು ಬರುವುದಿಲ್ಲ. ಇಂತಹ ಸಂದರ್ಭ ಶ್ರೀ ಆಶ್ರಮದ ವತಿಯಿಂದಲೇ ಭಿಕ್ಷಾ ವಂದನೆಯನ್ನು ಸಲ್ಲಿಸಲಾಗುವುದು. ನಂತರ ಶ್ರೀ ಆಶ್ರಮದ ಭೋಜನ ಶಾಲೆಯಲ್ಲಿ ಭಕ್ತಾದಿಗಳಿಗೆ ಮಹಾಪ್ರಸಾದದ ವಿನಿಯೋಗವಾಗುತ್ತದೆ. ಏಕಾದಶಿ, ಶ್ರೀ ದತ್ತ ಜಯಂತಿಯ ದಿನ, ಶ್ರೀರಾಮನವಮಿ, ಗ್ರಹಣ, ಶ್ರೀ ಮಹಾಶಿವರಾತ್ರಿ ಮತ್ತು ಕೆಲವು ಭೋಜನ ನಿಷಿದ್ಧವಾದ ದಿನಗಳಲ್ಲಿ ಈ ಸೇವೆ ನಡೆಯುವುದಿಲ್ಲ. ಭಕ್ತಾಧಿಗಳು ನೀಡುವ ಹಣವನ್ನು ಬ್ಯಾಂಕಿನಲ್ಲಿ ಖಾಯಂ ಠೇವಣಿಯಾಗಿಟ್ಟು ಇದರಿಂದ ಬರುವ ಬಡ್ಡಿಯ ಹಣದಲ್ಲಿ ಸೇವಾ ಕರ್ತರು ಅಪೇಕ್ಷಿಸಿದ ದಿನದಂದು ಪ್ರತಿ ವರ್ಷ ಸಲ್ಲಿಸಲಾಗುವುದು.
According Hindu Dharmashastra offering Bhiksha to Sanyasi is a holy work, it enhance Ayushya, Arogya, Aishwarya and it eradicates all the sin(Papam) In Bhagawan Sadguru Shri Swamijy’s Sannidhanam in the time of Madhyanha Pooja Bhiksha Seva will be offered to Shri Bhagawan. In the time of doing this Seva dress code ordained by Bhagawan Sadguru Shri Shridhar Swamijy gents-Dhoti and Shalya/towel or (silk, spun dhoti) Ladies-Saree. This Seva will not be held on Ekadashi, Shri Datta Jayanthi, Shri Ramanavami, Shri Mahashivarathri, Shri Krishnastami, Solar and Lunar eclipse and other days prohibited by Hindu Shastras to take meals. On the day of Dwadashi in the time of Pratha Pooja will be offered to Shri Bhagawan (7.00 a.m to 7.30 a.m) This seva can be done on any day given by Sevadar’s. In this seva will be done on requested date or Tithi given by Sevadar’s every year. For this Seva Sevadar’s has to Deposit amount fixed by the Mahamandala. By the interest of the this deposit the seva will be performed every year.
Seva Amount : ₹25000

ಸರ್ವ ಸೇವಾ / Sarva Seva
ಈ ಸೇವೆಯಲ್ಲಿ ಶತರುದ್ರಾಭಿಷೇಕ, ಅರ್ಚನ ಸೇವೆ, ಸ್ವಹಸ್ತ ಪಾದುಕಾಪೂಜೆ, ಭಿಕ್ಷಾ ಸೇವೆ, ಅನ್ನದಾನ ಸೇವೆ ಅಲ್ಲದೇ ಶ್ರೀ ಶ್ರೀಧರಾಶ್ರಮದ ಒಂದು ದಿನದ ಖರ್ಚಿನ ಮೊಬಲಗನ್ನು ಸಾಂಕೇತಿಕವಾಗಿ ಇಟ್ಟಿರುತ್ತದೆ.
This Seva includes Shatha Rudrabhisheka, Archana Seva, Swa Hastha Paduka Pooja Seva, Bhiksha Seva, Annadhana Seva, Gouseva and a token amount of Shri Shridharashrama Varadapur’s one day expenses.
Seva Amount : ₹35000
